ಬೆಂಗಳೂರು: ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ದಾಳಿ..! ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಹಣವನ್ನ ಬಾಜಿ ಕಟ್ಟಿ ಕಾನೂನು ಬಾಹಿರವಾಗಿ ಪೋಕರ್ ಆಟ ಆಡಿಸುತ್ತಿದ್ದ ಮಾಲೀಕ ಮುಕೇಶ್ ಚಾವ್ಲಾನನ್ನು ಬಂಧನಕ್ಕೊಳಪಡಿಸಿದೆ. ಬೆಂಗಳೂರು: ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಹಣವನ್ನ ಬಾಜಿ ಕಟ್ಟಿ ಕಾನೂನು ಬಾಹಿರವಾಗಿ ಪೋಕರ್ ಆಟ ಆಡಿಸುತ್ತಿದ್ದ ಮಾಲೀಕ ಮುಕೇಶ್ ಚಾವ್ಲಾನನ್ನು ಬಂಧನಕ್ಕೊಳಪಡಿಸಿದೆ.ಮುಕೇಶ್ ಚಾವ್ಲ, ಕೋರಮಂಗಲದ 80 ಫೀಟ್ ರಸ್ತೆಯಲ್ಲಿ ಗೇಮಿಂಗ್ ಶಾಪ್ ಓಪನ್ ಮಾಡಿ, ಗೋಲ್ಡನ್ ‌ಏಸ್ ಪೋಕರ್ ರೂಮ್ ಹೆಸರನಲ್ಲಿ ಪೋಕರ್ ಗೇಮ್ ನಡೆಸುತ್ತಿದ್ದ.ರಾತ್ರಿ ಪೂರ್ತಿ ಪೋಕರ್ ಆಟ ಆಡಿಸುತ್ತಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿದ್ದು. ಮಾಹಿತಿ ಆಧರಿಸಿ ಶನಿವಾರ ರಾತ್ರಿ ದಾಳಿ ಮಾಡಿ ಮುಕೇಶ್ನನ್ನು ಬಂಧನಕ್ಕೊಳಪಡಿಸಿದೆ.ಈ ಹಿಂದೆ ದೇವನಹಳ್ಳಿ ಬಳಿಯೂ ಪೋಕರ್ ಅಡ್ಡೆ ನಡೆಸಿದ್ದ ಆರೋಪಿಯನ್ನು ಸಿಸಿಬಿ ಬಂಧನಕ್ಕೊಳಪಡಿಸಿತ್ತು. ಇದೀಗ ಮತ್ತೆ ಕೋರಮಂಗಲದಲ್ಲಿ ಪೋಕರ್ ಗೇಮ್ ಓಪನ್ ಮಾಡಿದ್ದಾನೆ.ಈ ಸಂಬಂಧ ಸಿಸಿಬಿ ಸಂಘಟಿತ ಅಪರಾಧ ದಳ() ಅಧಿಕಾರಿಗಳು ಕಾರ್ಯಾಚರಣೆ ನಡೆಯುತ್ತಿದ್ದು, ದಾಳಿ ಮಾಡಿ ಪೋಕರ್ ಗೇಮ್ ಬಳಸುವ ವಸ್ತುಗಳು ಹಾಗೂ ಆಟಕ್ಕೆ ಬಾಜಿ ಕಟ್ಟಿದ್ದ ಲಕ್ಷಾಂತರ ಹಣ ವಶಕ್ಕೆ ವಶಕ್ಕೆ ಪಡೆದಿದ್ದಾರೆ.